Uttar Pradesh by-polls results show all is not well between PM Modi, BJP President Amit Shah and UP CM Yogi Adityanath. The PM, keeping away from campaigning in the high-voltage elections, seems to point to a deliberate strategy. While Yogi is upset with Amit Shah over candidate selection. At the end, BJP lost the crucial battle.
ಕೆಲವೊಂದು ಕ್ಷೇತ್ರಗಳೇ ಹಾಗೆ, ಚುನಾವಣೆಗೂ ಮುನ್ನವೂ ಹವಾ.. ಫಲಿತಾಂಶ ಬಂದ ನಂತರವೂ ಹವಾ.. ಆ ರೀತಿಯ ದೇಶದ ಲೋಕಸಭಾ ಕ್ಷೇತ್ರಗಳಲ್ಲೊಂದು ಉತ್ತರಪ್ರದೇಶದ ಗೋರಖಪುರ. ಹಾಗಾಗಿ, ಫಲಿತಾಂಶ ಬಂದ ಎರಡು ದಿನದ ನಂತರವೂ ಸೋಲು, ಗೆಲುವಿನ ಪರಾಮರ್ಶೆ ಮುಗಿಯುತ್ತಲೇ ಇಲ್ಲ. ಗೋರಖಪುರ ಲೋಕಸಭಾ ಕ್ಷೇತ್ರ ಹಾಲೀ ಸಿಎಂ ಯೋಗಿ ಆದಿತ್ಯನಾಥ್ ಕಳೆದ ಐದು ಬಾರಿಯಿಂದ ಸ್ಪರ್ಧಿಸುತ್ತಿದ್ದ ಕ್ಷೇತ್ರ. ಇಲ್ಲಿ ಯಾವುದು ವರ್ಕೌಟ್ ಆಗುತ್ತೆ, ಜಾತಿ ಸಮೀಕರಣ ನಡೆಯುತ್ತಾ, ಚುನಾವಣೆ ಗೆಲ್ಲಲು ಏನು ಮಾಡಬೇಕು ಎನ್ನುವುದು ಬಿಜೆಪಿಯ ಕೇಂದ್ರದ ನಾಯಕರಿಗಿಂತ ಯೋಗಿಗೇ ಇಲ್ಲಿನ ಸೂಕ್ಶ್ಮತೆಯ ಅರಿವಿರುವುದು.